ಎನ್.ಪಿ. ನಾಯರ್ (೧೦ ಡಿಸೆಂಬರ ೧೯೧೩ - ೨೩ ಜನವರಿ ೨೦೧೧) ಎಂದು ಜನಪ್ರಿಯವಾಗಿ ಕರೆಯಲ್ಪಡುವ ಎನ್. ಪರಮೇಶ್ವರನ್ ನಾಯರ್ ಕೊಲ್ಲಂನ ಭಾರತೀಯ ಸ್ವಾತಂತ್ರ್ಯ ಹೋರಾಟಗಾರ ಮತ್ತು ಲೇಖಕ. == ಆರಂಭಿಕ ಜೀವನ == ನಾಯರ್ ಅವರು ಎಸ್. ನಾರಾಯಣ ಪಿಳ್ಳೈ ಮತ್ತು ದೇವಿ ನಂಗೇಲಿ ಅಮ್ಮ ಅವರಿಗೆ ೧೦ ಡಿಸೆಂಬರ್ ೧೯೧೩ ರಂದು ಕೊಲ್ಲಂನಲ್ಲಿ ಜನಿಸಿದರು. ಅವರು ಅಂಚಲುಮೂಡ ಪಬ್ಲಿಕ್ ಸ್ಕೂಲ್ ಮತ್ತು ಕೊಲ್ಲಂ ಬಾಲಕರ ಪ್ರೌಢಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದರು. ಅವರ ಮಧ್ಯಂತರ ಅಧ್ಯಯನದ ನಂತರ, ಅವರು ೧೯೩೪ರಲ್ಲಿ ತಿರುವಾಂಕೂರು ವಿಜ್ಞಾನ ಕಾಲೇಜಿನಲ್ಲಿ ರಸಾಯನಶಾಸ್ತ್ರದಲ್ಲಿ ಬಿಎ ಪಡೆದರು. ಅವರು ಮಲಯಾದಲ್ಲಿ ಕೃಷಿ ಸಂಶೋಧನೆಯಲ್ಲಿ ರಸಾಯನಶಾಸ್ತ್ರಜ್ಞರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. == ಸ್ವಾತಂತ್ರ್ಯ ಚಳುವಳಿಗಳು == ೧೯೪೩ ರಲ್ಲಿ, ನಾಯರ್ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿದರು ಮತ್ತು ನೇತಾಜಿ ಸುಭಾಷ ಚಂದ್ರ ಬೋಸ್ ಅವರ ಆಜಾದ್ ಹಿಂದು ದಳಕ್ಕೆ ಸಿವಿಲ್ ಅಡ್ಮಿನಿಸ್ಟ್ರೇಟರ್ ಆಗಿ ಸೇರಿದರು. ಅವರು ೧೯೪೪ ರ ಏಪ್ರಿಲ್-ಜೂನ್ ಸಮಯದಲ್ಲಿ ಜಯವಾಡಿ ಸಂಕೀರ್ಣದಲ್ಲಿ ಸ್ಟಾಕ್ ಸೂಪರಿಂಟೆಂಡೆಂಟ್ ಆಗಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಲೋವರ್ ಬರ್ಮಾದ ಮಾವ್ಲಮೈನ್‌ಗೆ ವರ್ಗಾಯಿಸಲಾಯಿತು. ನಂತರ ಅವರನ್ನು ಬ್ರಿಟಿಷರು ಬಂಧಿಸಿ ಜೈಲಿಗೆ ಕಳುಹಿಸಿದರು. ಜೂನ ೧೯೪೬ ರಲ್ಲಿ, ಅವರು ಜೈಲಿನಿಂದ ಬಿಡುಗಡೆಯಾದರು. == ನಂತರದ ಜೀವನ == ನಾಯರ್ ೧೯೪೬ ರಲ್ಲಿ ಮದ್ರಾಸ್ ಪ್ರೆಸಿಡೆನ್ಸಿಯ ಕೃಷಿ ಇಲಾಖೆಗೆ ಕೃಷಿ ಸಂಶೋಧನಾ ವಿಶ್ಲೇಷಕರಾಗಿ ಸೇರಿಕೊಂಡರು ಮತ್ತು ೧೯೫೦ ರವರೆಗೆ ಅಲ್ಲಿ ಕೆಲಸ ಮಾಡಿದರು. ನಂತರ, ಅವರು ಮನ್ನಾತು ಪದ್ಮನಾಭನ್ ಅವರ ಕೋರಿಕೆಯ ಮೇರೆಗೆ ಕೊಲ್ಲಂಗೆ ಹಿಂದಿರುಗಿದರು ಮತ್ತು ಶಾಲೆಗಳಲ್ಲಿ ಶಿಕ್ಷಕರಾಗಿ ಕೆಲಸ ಮಾಡಿದರು. ೧೯೭೪ ರಲ್ಲಿ ಪಂದಳಂನ ಪ್ರೌಢಶಾಲೆಯಿಂದ ಮುಖ್ಯೋಪಾಧ್ಯಾಯರಾಗಿ ನಿವೃತ್ತರಾದರು. ೧೯೯೨ ರಲ್ಲಿ, ನಾಯರ್ ಕೊಲ್ಲಂನಲ್ಲಿ ನೇತಾಜಿ ಸ್ಮಾರಕ ನಿಧಿ ಎಂಬ ಲಾಭರಹಿತ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಕೇರಳ ಎಕ್ಸ-ಐಎನ್ಎ ಅಸೋಸಿಯೇಷನ್ ಮತ್ತು ಕೇರಳ ಸ್ವಾತಂತ್ರ್ಯ ಹೋರಾಟಗಾರರ ಸಂಘದ ಸದಸ್ಯರಾಗಿದ್ದರು. ನಾಯರ್ ಅವರು ೨೦೧೦ರಲ್ಲಿ ಪಾರ್ಶ್ವವಾಯುವಿಗೆ ತುತ್ತಾಗಿದ್ದರು ಮತ್ತು ೨೦೧೧ರಲ್ಲಿ ನಿಧನರಾದರು. ಭಾರ್ಗವಿ ಅಮ್ಮನನ್ನು ಮದುವೆಯಾಗಿದ್ದ ಇವರಿಗೆ ಇಬ್ಬರು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದರು. == ಲೇಖಕ == ನಾಯರ್ ಅವರು ಸ್ವಾತಂತ್ರ್ಯ ಚಳುವಳಿ ಮತ್ತು ಬೋಸ್ ಅವರ ಜೀವನ ಮತ್ತು ಸಮಯಗಳ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದರು ಮತ್ತು ಬೋಸ್ ಅವರ ಕಣ್ಮರೆ ರಹಸ್ಯದ ಬಗ್ಗೆ ಬರೆದಿದ್ದಾರೆ. ಅವರು ಜಲಿಯನ್ ವಾಲಾ ದುರಂತಮ್, ಕ್ವಿಟ್ಇಂಡಿಯಾ ಸಮರಂ, ನೇತಾಜಿ ಸುಭಾಷ ಚಂದ್ರ ಬೋಸ್, ಆಪರೇಷನ್ ಬ್ಲೂ ಸ್ಟಾನ್, ಸುಭಾಸಿಂತೆ ಸಾಹಸಿಕ ಯಾತ್ರೆಗಳು, ನೇತಾಜಿಯುದೇ ರಾಷ್ಟ್ರ ಸೇವೆಗಳು ಎಂಬ ಪುಸ್ತಕಗಳ ಲೇಖಕ. ಇವರು ೧೯೪೬-ಲೆ ಇಂಡಿಯನ ನಾವಿಕ ಲಹಲಾ ಪುಸ್ತಕವನ್ನೂ ಬರೆದಿದ್ದಾರೆ. ಅವರು ಐ‌ಎನ್‌ಎ-ಯಮ್ ನೇತಾಜಿ-ಯಮ್ ಅನ್ನು ಅನುವಾದ ಮಾಡಿದ್ದಾರೆ ಮತ್ತು ಪ್ರವಾಸ ಕಥನ ಅಂಡಮಾನೂಡ ವನ್ನು ಸಹ ಬರೆದಿದ್ದಾರೆ. ಕೇರಳ ಶಿಕ್ಷಣ ಇಲಾಖೆಗಾಗಿ ಅವರು ಸ್ಫೊಟಕವಸ್ತುಕ್ಕಲ ಮತ್ತು ರೈಲ್ವೇ - ಇನ್ನಲೆ, ಇನ್ನು, ನಾಲೆ ಎಂಬ ಪುಸ್ತಕಗಳನ್ನು ಬರೆದರು. == ಸಹ ನೋಡಿ == ವ್ಯಕ್ತಿಗಳ ಪಟ್ಟಿ == ಉಲ್ಲೇಖಗಳು ==